Friday, December 12, 2008

Abhinava Kalidasa Vidwan Basavappa Shastri - Ph.D. Thesis of Dr. Nellikatte S. Siddesh under the Guidance of Dr. Kumarachalya

ಡಾ ಸಿ.ಎಸ್. ಶಿವಕುಮಾರ ಸ್ವಾಮಿ
(ಕುಮಾರಚಲ್ಯ)
ಇವರ ಮಾರ್ಗದರ್ಶನದಲ್ಲಿ
ಡಾ. ನೆಲ್ಲಿಕಟ್ಟೆ ಎಸ್ . ಸಿದ್ದೇಶ್

ಸಿದ್ಧಪಡಿಸಿದ ಸಂಶೋಧನಾ ಪ್ರಬಂಧ

ಅಭಿನವ ಕಾಳಿದಾಸ
ವಿದ್ವಾನ್ ಬಸವಪ್ಪಶಾಸ್ತ್ರಿ
ಪ್ರಕಾಶಕರು :
ಬೆಳಗುಶ್ರೀ ಪ್ರಕಾಶನ, ನೆಲ್ಲಿಕಟ್ಟೆ
ಕಾಲಗೆರೆ ಅಂಚೆ, ಭರಮಸಾಗರ ಹೋಬಳಿ
ಪಿನ್ : ೫೭೭ ೫೧೯
ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ
ಬೆಲೆ: ರೂ. ೧೨೦-೦೦
ಫೋ: ೯೯೮೬೩೫೩೪೧೦

Dr Kumara Chalya felicitated on 23-11-2008 at Bellary

ದಿನಾಂಕ: 21ನೇ ನವಂಬರ್ 2008

ದಿನಾಂಕ: 23ನೇ ನವಂಬರ್ 2008ರಂದು ಡಾ. ಕುಮಾರಚಲ್ಯ ಅವರಿಗೆ ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯು ಡಾ. ಎಚ್. ನರಸಿಂಹಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವ ಈ ಶುಭ ಸಂದರ್ಭ ನಿಮಿತ್ತ ಈ ಲೇಖನ
ಸರಳ ಸಜ್ಜನಿಕೆಯ ಸೃಜನಶೀಲ ವಿದ್ವಾಂಸ
ಡಾ. ಕುಮಾರಚಲ್ಯ
ವಿನಯ, ವಿಧೇಯತೆಯಿಂದ ವಿದ್ಯೆಯನ್ನು ಪಡೆದು; ಸದ್ಗುಣವಂತರಾಗಿ, ಸದಾ ಸತ್ಕಾರ್ಯದಲ್ಲಿ ನಿರತರಾಗಿ; ಸಾರ್ಥಕವಾಗಿ ಬಾಳಿರೆಂದು ತಮ್ಮ ಶಿಷ್ಯ ಸಂಕುಲಕ್ಕೆ ಬೋಧಿಸುತ್ತಲೇ ಬಾಳಿ ಬೆಳಗುತ್ತಿರುವ ಸರಳ ಸಜ್ಜನಿಕೆಯ ಮೇಸ್ಟ್ರು ಡಾ. ಸಿ.ಎಸ್. ಶಿವಕುಮಾರಸ್ವಾಮಿ, ಕುಮಾರಚಲ್ಯ ಎಂಬ ಕಾವ್ಯನಾಮದಿಂದ ಸಾಹಿತ್ಯ ವಲಯದಲ್ಲಿ ಸುಪ್ರಸಿದ್ಧರಾಗಿರುವರು. ಸುಮಾರು ಮೂರು ದಶಕಗಳಿಂದ ಸ್ನಾತಕೋತ್ತರ ಪದವಿ ತರಗತಿಗಳಿಗೆ ಬೋಧಿಸುವಲ್ಲಿ ತೊಡಗಿಕೊಂಡು, ಹೊಸ ಹೊಸ ಬೋಧನಾ ವಿಧಾನಗಳ ಮೂಲಕ ವಿದ್ಯಾಥರ್ಿಗಳ ಹೃನ್ಮನವನ್ನು ವಿಕಾಸಗೊಳಿಸುತ್ತಿರುವ ಡಾ. ಕುಮಾರಚಲ್ಯ ಅವರು ಶಿಸ್ತು, ನಿಷ್ಠೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಆದರ್ಶ ಅಧ್ಯಾಪಕರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಚಲ್ಯ ಗ್ರಾಮದಲ್ಲಿ ಮಹದೇವಮ್ಮ-ಸಿ.ಎನ್. ಶಿವಬಸವಯ್ಯ ದಂಪತಿಗಳ ಮಡಿಲಲ್ಲಿ ಆಕ್ಟೋಬರ್ 18, 1954ರಲ್ಲಿ ಜನಿಸಿದ ಸುಪುತ್ರರು. ತಂದೆ ಸಿ.ಎನ್. ಶಿವಬಸವಯ್ಯನವರು ಪ್ರಗತಿಪರ ಚಿಂತನೆಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದ ಸಮಾಜಸುಧಾರಕರು. ಶ್ರೇಷ್ಠ ಶಿಕ್ಷಣ ತಜ್ಞರು. ಜಾತಿಭೇದ ತೊಲಗಿಸಲು ಶಕ್ತಿಮೀರಿ ಹೋರಾಡಿದವರು. ನೊಂದವರ ನೋವು ನಿವಾರಿಸಲು ಹೆಣಗಾಡಿದವರು. ಹಸಿದವರಿಗೆ ಅನ್ನದಾನವ ಮಾಡಿದವರು. ಅಕ್ಷರ ವಂಚಿತರಿಗೆ ಅಕ್ಷರವ ಕಲಿಸಿ ಅಜ್ಞಾನವನ್ನು ಹೋಗಲಾಡಿಸಲು ತಮ್ಮ ಸಂಪೂರ್ಣ ಜೀವನವನ್ನೇ ಸಮಪರ್ಿಸಿದವರು. ಶೋಷಿತರ ಏಳಿಗೆಗಾಗಿ ತಮ್ಮ ಆಸ್ತಿಯನ್ನೇ ದಾನ ಮಾಡಿದ ದಾನಶೂರರು. ಅಂಥ ಅಪೂರ್ವ ವ್ಯಕ್ತಿತ್ವದ ಮೇಷ್ಟ್ರು ಶಿವಬಸವಯ್ಯನವರ ಸತ್ಕಾರ್ಯಗಳನ್ನು ಮುಂದುವರಿಸುತ್ತಿರುವ ಕುಮಾರಚಲ್ಯ ತಂದೆಗೆ ತಕ್ಕ ಮಗ. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಶಿವಕುಮಾರಸ್ವಾಮಿಯವರು 1977ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಶ್ರೀಕಂಠಯ್ಯ ಸ್ಮಾರಕ ಚಿನ್ನದ ಪದಕ, ಪ್ರೊ. ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಚಿನ್ನದ ಪದಕ, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಚಿನ್ನದ ಪದಕ, ಬಿ.ಎಸ್. ತಮ್ಮಯ್ಯ ಚಿನ್ನದ ಪದಕ, ಕೆ.ನೀ. ಸಿದ್ದಪ್ಪ ಚಿನ್ನದ ಪದಕ, ನರಸಮ್ಮ ನಾರಾಯಣಶಾಸ್ತ್ರಿ ಚಿನ್ನದ ಪದಕ, ಮಹಾವಿದ್ವಾನ್ ಅಂಬಳೆ ರಾಮಕೃಷ್ಣಶಾಸ್ತ್ರಿ ಪಾರಿತೋಷಕ, ಪಂಡಿತ ತಿರುನಲ್ಲೂರು ಶ್ರೀನಿವಾಸ ರಾಘವಾಚಾರ್ ಪಾರಿತೋಷಕ-ಹೀಗೆ 6 ಚಿನ್ನದ ಪದಕ, 2 ಪಾರಿತೋಷಕಗಳೊಂದಿಗೆ ಕನ್ನಡ ಎಂ.ಎ. ಪದವಿಯನ್ನು ಪಡೆದ ಸೃಜನಶೀಲ ಪ್ರತಿಭೆ.ಅಪ್ಪನ ಬಳುವಳಿ ಪರಿಶುದ್ಧ ನಡೆ-ನುಡಿಯ ಸಂಸ್ಕಾರ ಮಾತ್ರ. ವ್ಯಾಸಂಗಾವಧಿಯಲ್ಲಿ ಸಾಕಷ್ಟು ಆಥರ್ಿಕ ಸಂಕಷ್ಟಗಳನ್ನು ಅನುಭವಿಸುತ್ತಾ ಅಧ್ಯಯನ ಮಾಡಿದ ಶಿವಕುಮಾರಸ್ವಾಮಿಯವರು ರಾತ್ರಿ ಹೊತ್ತು ಆಟೋ ಡ್ರೈವರ್ ಆಗಿ ಕೆಲಸ ಮಾಡಿ; ಹಗಲು ಹೊತ್ತು ಶಾಲಾ-ಕಾಲೇಜಿಗೆ ಹೋಗಿ, ವಿದ್ಯೆಯನ್ನು ಸಂಪಾದಿಸಿದ ವೈಚಾರಿಕ ಚಿಂತಕರು.ನವಾಬ, ವಚನಕಾರರ ಜೀವನ ದೃಷ್ಟಿ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ ದೇವುಡು, ಸಂಗತ, ಕಾಲಮಾನ, ಕಿನ್ನರಿ ಜೋಗಿಗಳು, `ಬೇರುತೋರಿದ ಹಾದಿ, ಗುಲಾಬಿ ಮತ್ತು ಪಾರಿವಾಳ, ಸಕಲೇಶಮಾದರಸ, ವೀರಶೈವ ಕಾವ್ಯ ಪರಂಪರೆ - ಮೊದಲಾದ ಕೃತಿಗಳನ್ನು ಪ್ರಕಟಿಸಿರುವ ಕುಮಾರ ಚಲ್ಯ ಅವರು ಕನರ್ಾಟಕ ಜಾತ್ರೆಗಳು, ಜನಪದಸಾಹಿತ್ಯ, ಪ್ರಾದೇಶಿಕ ಜಾನಪದ ಬಂಡಾಯ ಸಾಹಿತ್ಯ ಹತ್ತು ವರ್ಷ- ಮೊದಲಾದ ಕೃತಿಗಳನ್ನು ಸಂಪಾದಿಸಿ ಕನ್ನಡ ನಾಡು-ನುಡಿಗೆ ಸಮಪರ್ಿಸಿದ್ದಾರೆ. ಕೃತಿನಿಷ್ಠವಿಮರ್ಶಕರೂ, ಸಮಾಜಮುಖಿ-ಜೀವನ್ಮುಖಿಯಾದ ಸೃಜನಶೀಲ ಲೇಖಕರೂ, ಸಾಮರಸ್ಯದ ಸವಿಗನಸಿನ ಕವಿಗಳೂ, ಆದ ಕುಮಾರಚಲ್ಯ ಅವರು ದೇವುಡು ಅವರ ಸೃಜನಶೀಲ ಸಾಹಿತ್ಯ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿರುವರು. ಮುನ್ನೂರುಕ್ಕೂ ಹೆಚ್ಚು ಸಂಪ್ರಬಂಧಗಳನ್ನು ವಿದ್ವತ್ ಗೋಷ್ಠಿಗಳಲ್ಲಿ ಮಂಡಿಸಿರುವ ಶ್ರೀಯುತರು, ದಸರಾ ಕವಿಸಮ್ಮೇಳನ, 65, 71 ಮತ್ತು 73ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ, ಕನರ್ಾಟಕ ಸಾಹಿತ್ಯ ಅಕಾಡೆಮಿ, ಕನರ್ಾಟಕ ಜಾನಪದ ಯಕ್ಷಗಾನ ಅಕಾಡೆಮಿ ಮೊದಲಾದ ಸಂಘ ಸಂಸ್ಥೆಗಳು ಏರ್ಪಡಿಸಿದ ವಿಚಾರ ಸಂಕಿರಣಗಳಲ್ಲಿ ತಮ್ಮ ವಿದ್ವತ್ತು, ಸೃಜನಶೀಲತೆ, ವಿಮಶರ್ಾ ಮನೋಧರ್ಮವನ್ನು, ಘನ ಚಿಂತನೆಗಳನ್ನು ಆಭಿವ್ಯಕ್ತಿಸಿರುವರು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕ, ಮೊಟ್ಟಮೊದಲ ಸಾರ್ವಜನಿಕ ಸಂಪರ್ಕಧಿಕಾರಿ, ಕನ್ನಡ ಕಂಪ್ಯೂಟರ್ ಕೇಂದ್ರದ ಸಂಚಾಲಕ, ವಾತರ್ಾಪತ್ರದ ಸಂಪಾದಕ, ಪರೀಕ್ಷಾ ಮಂಡಳಿ ಅಧ್ಯಕ್ಷ, ಪಠ್ಯಪುಸ್ತಕ ಸಮಿತಿ ಸದಸ್ಯ, ಮೈಸೂರು, ಬೆಂಗಳೂರು, ಮಂಗಳೂರು, ಕನರ್ಾಟಕ, ಕೇರಳ ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿ ಸದಸ್ಯ ಈ ಮೊದಲಾದ ಹುದ್ದೆಗಳಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುವಲ್ಲಿ ಸಫಲರಾಗಿರುವ ಡಾ. ಕುಮಾರ ಚಲ್ಯ ಅವರು ಸಹೃದಯರ ಗೌರವ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯ ಪ್ರಸಾರಂಗದ ನಿದರ್ೆಶಕರಾಗಿ, ಕನ್ನಡ ಭಾರತಿ ನಿದರ್ೆಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಭದ್ರಾವತಿಯಲ್ಲಿ ನಡೆದ 2ನೇ ತಾಲ್ಲೂಕು ಶರಣಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಬಿಟ್ಟರೆ, ಯಾವುದೇ ಪ್ರಶಸ್ತಿ, ಪುರಸ್ಕಾರ, ಬಹುಮಾನಗಳಿಗೆ ಹಾಗೂ ಅತಿ ಜನಪ್ರಿಯತೆಗೆ ಬಹುದೂರವಿರುವ ಡಾ. ಕುಮಾರಚಲ್ಯ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಹತ್ತು ಅಭ್ಯಥರ್ಿಗಳು, ನಾಲ್ಕು ಅಭ್ಯಥರ್ಿಗಳು ಎಂ.ಫಿಲ್. ಪದವಿಯನ್ನು ಪಡೆದಿರುತ್ತಾರೆ. ಸಾವಿರಾರು ಶಿಷ್ಯರ ಬದುಕನ್ನು ಸರಿದಾರಿಯಲ್ಲಿ ನಿರ್ವಹಿಸುವಂತೆ ಸನ್ಮಾರ್ಗದರ್ಶಕರಾಗಿದ್ದಾರೆ. ಇಂಥಹ ಸಾತ್ವಿಕ ಧೀಮಂತ ಪ್ರತಿಭೆಗೆ ಬಳ್ಳಾರಿಯ ಡಾ. ಸುಭಾಷ್ಭರಣಿ ಸಾಂಸ್ಕೃತಿಕ ವೇದಿಕೆಯು ಶ್ರೇಷ್ಠ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಔಚಿತ್ಯ ಪೂರ್ಣವಾಗಿದೆ. ಶ್ರೀಯುತರ ಸಾಹಿತ್ಯಿಕ, ಆಡಳಿತ್ಮಾಕ, ಸೃಜನಶೀಲ ಸಾತ್ವಿಕ ಸೇವೆ ಇನ್ನೂ ನೂರ್ಮಡಿಯಾಗಲಿ.
ಸಿ.ಎಂ. ಅಶೋಕನೆಲ್ಲಿಕಟ್ಟೆ
ಪ್ರಕಾಶಕರು, ಬೆಳಗುಶ್ರೀ ಪ್ರಕಾಶನನೆಲ್ಲಿಕಟ್ಟೆ
ಕಾಲಗೆರೆ ಅಂಚೆ.ಭರಮಸಾಗರ ಹೋಬಳಿ
ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ.